ಕೆಜಿಎಫ್ ಚಾಪ್ಟರ್ -2 ಯಾವಾಗ ರಿಲೀಸ್ ಆಗುತ್ತೋ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಕಾದು ಕೂತಿದ್ದಾರೆ. ಇತ್ತ ಯಶ್ ಕೂಡ ಅದೇ ದಿನಕ್ಕಾಗಿ 4 ವರ್ಷದಿಂದ ಕಾಯ್ತಿದ್ದಾರೆ ಅನ್ನಿಸುತ್ತಿದೆ. ಕೆಜಿಎಫ್ ಕಥೆ ಮುಗಿಸಿರೋ ತಂಡದ ಸದಸ್ಯರು ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಟೀಂ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದೆ. ಆದರೆ ಯಶ್ ಮಾತ್ರ ಚಾಪ್ಟರ್ – 2 ನಂತ್ರ ಯಾವ ಸಿನಿಮಾ ಮಾಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಮಫ್ತಿ ಡೈರೆಕ್ಟರ್ ನರ್ತನ್ ಜೊತೆ ಮುಂದಿನ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿದ್ರು, ಅದು ಇನ್ನು ಪಕ್ಕಾ ಆಗಿಲ್ಲ. ಈ ಗ್ಯಾಪ್ ನಲ್ಲೇ ಯಶ್- ನರ್ತನ್ ಕಾಂಬಿನೇಷನ್ ಸಿನಿಮಾ ಬಗ್ಗೆ ಕಳೆದೆರಡು ದಿನಗಳಿಂದ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ.
ನರ್ತನ್ ಡೈರೆಕ್ಟ್ ಮಾಡ್ತಿರೋ ಚಿತ್ರದಲ್ಲಿ ಯಶ್ ನೇವಿ ಆಫೀಸರ್ ರೋಲ್ ಪ್ಲೇ ಮಾಡ್ತಾರೆ ಅಂತ ಅದ್ಯಾರ್ ಹೇಳಿದ್ರೆ ಗೊತ್ತಿಲ್ಲ. ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ನೇವಿ ಆಫೀಸರ್ ಜೊತೆಗೆ ಆ್ಯಂಗ್ರಿ ಯಂಗ್ ಮ್ಯಾನ್ ಶೇಡ್ ಇರೋ ಪಾತ್ರವನ್ನ ಯಶ್ ಗೋಸ್ಕರ ನರ್ತನ್ ಡಿಸೈನ್ ಮಾಡಿದ್ದಾರೆ ಅಂತ ಚರ್ಚೆ ಆಗ್ತಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಯಶ್ ವೈಟ್ ಶರ್ಟ್, ಕ್ಯಾಪ್ ಹಾಕಿರೋ ಫೋಟೋಗಳನ್ನು ಡಿಸೈನ್ ಮಾಡಿ ಪೋಸ್ಟರ್ ಗಳನ್ನ ಕೂಡ ತೇಲಿ ಬಿಟ್ಟಿದ್ದಾರೆ. ಮನಸ್ಸಲ್ಲೇ ನೇವಿ ಆಫೀಸರ್ ಯಶ್ ಅವತಾರವನ್ನ ಇಮ್ಯಾಜಿನ್ ಮಾಡ್ಕೊಂಡು ಖುಷಿಪಡ್ತಿದ್ದಾರೆ.
ಕಹಾನಿ ಅಲ್ಲಿ ಟ್ವಿಸ್ಟ್ ಏನು ಅಂದ್ರೆ, ನರ್ತನ್ ಯಶ್ ಗೋಸ್ಕರ ನೇವಿ ಆಫೀಸರ್ ಕಥೆ ಮಾಡಿಲ್ಲವಂತೆ. ಹೀಗಂತ ಅವರ ಆಪ್ತ ವಲಯವೇ ಹೇಳ್ತಿದೆ. ಮಫ್ತಿ ನಂತರ ಯಶ್ ಗಾಗಿ ನರ್ತನ್ ಕಥೆ ಮಾಡ್ತಿರೋದೋ ನಿಜ. ನರ್ತನ್ ಹೇಳಿರೋ ಒನ್ ಲೈನ್ ಕಥೆ ಕೇಳಿ ಥ್ರಿಲ್ ಆಗಿರೋ ಯಶ್ ಅದನ್ನ ಡೆವ್ಲಪ್ ಮಾಡೋಕೆ ಹೇಳಿದ್ದಾರಂತೆ. ಅದರಂತೆ ಬಹಳ ಪವರ್ ಫುಲ್ ಕಥೆಯನ್ನ ಯಶ್ ಗಾಗಿ ನರ್ತನ್ ಮಾಡ್ಕೊಂಡಿದ್ದಾರೆ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವಂತೆ ನರ್ತನ್ ಸಿನಿಮಾದಲ್ಲಿ ನೇವಿ ಆಫೀಸರ್ ರೋಲ್ ನಲ್ಲಿ ಯಶ್ ಕಾಣಿಸಿಕೊಳ್ಳಲ್ಲ ಅಂತಿದ್ದಾರೆ. ಅಯ್ಯೋ ಯಾರಿಗ್ ಗೊತ್ತು. ಅದೇ ನಿಜ ಆಗಿದ್ದರೂ ಆಗಿರಬಹುದು. ಈ ಸಿನಿಮಾದವರ ಮಾತನ್ನ ಅಷ್ಟು ಸುಲಭವಾಗಿ ನಂಬೋಕೆ ಆಗಲ್ಲ. ಆದಷ್ಟು ಬೇಗ ಸಿನಿಮಾ ಅನೌನ್ಸ್ ಆಗಲಿ. ಆಗ ಅಸಲಿ ಸಂಗತಿ ಏನು ಅಂತ ಗೊತ್ತಾಗತ್ತೆ.