ರಾಕಿಂಗ್ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ಚಿತ್ರೀಕರಣವನ್ನ ಮುಗಿಸಿ, ಹೊಸ ಪ್ರಾಜೆಕ್ಟ್ ಟೇಕ್ ಆಫ್ ಮಾಡೋಕೆ ಸಜ್ಜಾಗಿದ್ದಾರೆ. ಆದ್ರೆ ಅದಕ್ಕೂ ಮುನ್ನ ಯಶ್ ತನ್ನ ಫಾರ್ಮ್ ಹೌಸ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ರೆ, ಹಾಸನದ ತಿಮ್ಲಾಪುರದಲ್ಲಿ ಯಶ್ ಕೃಷಿಯ ವಿಶೇಷತೆಯೇನು?
ರಾಕಿಂಗ್ ಸ್ಟಾರ್ ಯಶ್ ಕೃಷಿ ಕಾಯಕದಲ್ಲಿ ಬ್ಯುಸಿಯಾಗಿದ್ಧಾರೆ. ಹಾಸನದ ತಿಮ್ಲಾಪುರ ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ಇದ್ರೊಂದಿಗೆ ಕೊಳವೆ ರಹಿತ ಬಾವಿ, ಇಂಗುಗುಂಡಿ ಮೂಲಕ ನೀರು ಸಂಗ್ರಹಣೆ ಮಾಡಿ ವ್ಯವಸಾಯ ಮಾಡಲು KGF ನಟ ಯಶ್ ನಿರ್ಧರಿಸಿದ್ದಾರೆ. ಈ ಮೂಲಕ ಹೊಸ ವಿಧಾನಗಳ ಮೂಲಕ ಕೃಷಿ ಯನ್ನ ಪರಿಚಯಿಸಿ, ರೈತರಿಗೆ ಮಾದರಿಯಾಗಲು ಮುಂದಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಯಶ್ ಹಾಸನ ತಿಮ್ಲಾಪುರದಲ್ಲಿ ಸುಮಾರು 80 ಎಕ್ಕರೆ ಜಮೀನನ್ನು ಖರೀದಿ ಮಾಡಿದ್ದರು. ಈಗ ಅದೇ ಜಮೀನಿನಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಯಶ್ ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರೋ ಫೋಟೊಗಳು ವೈರಲ್ ಆಗಿದ್ದವು.
ಸುಮಾರು ಒಂದು ತಿಂಗಳ ಹಿಂದೆ ಇದೇ ಜಮೀನಿನಲ್ಲಿ ರಸ್ತೆ ಮಾಡುವಾಗ ವಿವಾದಕ್ಕೀಡಾಗಿತ್ತು. ಗ್ರಾಮಸ್ಥರು ಹಾಗೂ ಯಶ್ ಕುಟುಂಬದ ಮಧ್ಯೆ ವಾಗ್ವಾದ ನಡೆದಿತ್ತು. ಬಳಿಕ ಗ್ರಾಮಸ್ಥರೊಂದಿಗೆ ಕೂತು ಈ ವಿವಾದವನ್ನ ರಾಕಿಂಗ್ ಸ್ಟಾರ್ ಬಗೆಹರಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಜಮೀನಿನಲ್ಲಿ ಕೆಲಸ ಶುರು ಮಾಡಿದ್ದಾರೆ.