ಈ ಬಾರಿ ತಮಿಳುನಾಡು ಚುನಾವಣೆ ಸಾಕಷ್ಟು ಕುತೂಹಲವನ್ನ ಸೃಷ್ಟಿಸಿದೆ. ಜಯಲಲಿತಾ ಹಾಗೂ ಕರುಣಾನಿಧಿ ಇಬ್ಬರೂ ನಿಧನವಾದ ಬಳಿಕ ನಡೆಯುತ್ತಿರೋ ಮೊದಲ ಚುನಾವಣೆ ಆಗಿರೋದ್ರಿಂದ ತಮಿಳುನಾಡಿನ ಚುಕ್ಕಾಣಿಯನ್ನ ಯಾರು ಹಿಡಿಯುತ್ತಾರೆ ಅನ್ನೋದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ಕಮಲ್ ಹಾಸನ್ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಕಮಲ್ ಹಾಸನ್ ಅವರ ‘ಮಕ್ಕಳ್ ನಿಧಿ ಮಯ್ಯಂ’ ಪಕ್ಷ ಈ ಬಾರಿ ಚುನಾವಣೆಯಲ್ಲಿ ಫುಲ್ ಆ್ಯಕ್ಟೀವ್ ಆಗಿದೆ. ಕಮಲ್ ಹಾಸನ್ ಅಂತೂ ರಾಜ್ಯದ ಉದ್ದಗಲಕ್ಕೂ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆ ಕಮಲ್ ಮುಂದಾಗಿದ್ದಾರೆ. ಹೀಗಾಗಿ ಚುನಾವಣೆಗೆ ನಾಮಪತ್ರ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿರಿಯ ನಟಿ ಸುಹಾಸಿನಿ ಕಮಲ್ ಹಾಸನ್ ಮನೆಗೆ ತೆರಳಿ ಶುಭ ಕೋರಿದ್ದಾರೆ.
ಮಣಿರತ್ನಂ ಪತ್ನಿ ಸುಹಾಸಿನಿ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೋ ಅಣ್ಣ ಕಮಲ್ ಹಾಸನ್ ಗೆ ಶುಭಕೋರಲು ಅವರ ಮನೆಗೆ ಹೋಗಿದ್ದರು. ಈ ವೇಳೆ ಇಬ್ಬರೂ ಚುನಾವಣಾ ತಯಾರಿ ಬಗ್ಗೆ ಕೆಲ ಕಾಲ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಸುಹಾಸಿನಿ, ಕಮಲ್ರನ್ನ ಭೇಟಿಯಾದ ಫೋಟೊವೀಗ ವೈರಲ್ ಆಗಿದೆ.
ಕಮಲ್ ಹಾಸನ್ ಅಣ್ಣನ ಮಗಳು ಸುಹಾಸಿನಿ ಮಣಿರತ್ನಂ. ಹೀಗಾಗಿ ಕಮಲ್ ಚುನಾವಣಾ ಸ್ಪರ್ಧೆಗೆ ವಿಶ್ ಮಾಡಲು ಬಂದಿದ್ದರು. ಸುಹಾಸಿನಿಗೆ ಕಮಲ್ ಎರಡನೇ ಪುತ್ರಿ ಅಕ್ಷರ ಹಾಸನ್ ಜೊತೆಯಾಗಿದ್ದರು.