ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಕಳೆದ ಎರಡು ವರ್ಷಗಳಿಂದ ಮಹಾಗ್ರಂಥ ಮಹಾಭಾರತವನ್ನ ತೆರೆಮೇಲೆ ತರೋಕೆ ಸಜ್ಜಾಗುತ್ತಿದ್ದರು. ಹಲವು ಭಾರಿ ಮಹಾಭಾರತದ ಬಗ್ಗೆ ಆಮಿರ್ ಖಾನ್ ಮಾಡಿದ್ದೂ ಇದೆ. ಆದ್ರೆ, ಈಗ್ಯಾಗೋ ಮಹಾಭಾರತದಿಂದ ಆಮಿರ್ ಹಿಂದೆ ಸರಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಆಮಿರ್ ಖಾನ್ಗೆ ಮಹಾಭಾರತವನ್ನ ವೆಬ್ ಸಿರೀಸ್ ಮಾಡೋ ಪ್ಲ್ಯಾನ್ ಇತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಮಹಾಭಾರತಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿಟ್ಟುಕೊಂಡಿದ್ದರು. ಆದ್ರೀಗ, ಈ ಮಹಾ ಪ್ರಾಜೆಕ್ಟ್ ಅನ್ನ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ತನ್ನ ಎರಡು ವರ್ಷಗಳನ್ನ ವೆಬ್ ಸಿರೀಸ್ಗಾಗಿ ಮೀಸಲಿಡುವುದು ಈಗ ಸೂಕ್ತವಲ್ಲವೆಂದು ಆಮಿರ್ ತೀರ್ಮಾನಿಸಿದ್ದಾರೆ. ಹೀಗಾಗಿ ಮಹಾಭಾರತ ಸದ್ಯಕ್ಕೆ ಸೆಟ್ಟೇರುವುದಿಲ್ಲವೆಂದು ಹೇಳಲಾಗುತ್ತಿದೆ.
ಆಮಿರ್ ಖಾನ್ ಹೊಸ ಸಿನಿಮಾ ಇಷ್ಟೊತ್ತಿಗಾಗ್ಲೇ ಅನೌನ್ಸ್ ಆಗಬೇಕಿತ್ತು. ಆದ್ರೆ, ಲಾಕ್ಡೌನ್ನಿಂದ ಆದೂ ಕೂಡ ತಡವಾಗಿದೆ. ಹೀಗಾಗಿ ಆಮಿರ್ ಖಾನ್ ಮಹಾಭಾರತವನ್ನ ಮುಂದೂಡಿದ್ದು, ಮುಂದೊಂದು ದಿನ ವೆಬ್ ಸಿರೀಸ್ ಮಾಡೋದಾಗಿ ಹೇಳಿದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.
ಆಮಿರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ವರ್ಷ ಡಿಸೆಂಬರ್ನಲ್ಲೇ ಈ ಸಿನಿಮಾ ಬಿಡುಗಡೆಯಾಗ್ಬೇಕಿತ್ತು. ಆದ್ರೆ, ಕೊರೊನಾ, ಲಾಕ್ಡೌನ್ ಅಂತ ಸಿನಿಮಾವನ್ನ ಮುಂದೂಡಲಾಗಿತ್ತು. ಹೀಗಾಗಿ ಈ ವರ್ಷ ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.