ಗಂಡ ಹೆಂಡತಿ ಡಿವೋರ್ಸ್ಗೆ ಮುಂದಾಗಿದ್ದಾರೆ ಅಂದ್ರೆ ಏನೋ ಬಲವಾದ ಕಾರಣವೇ ಇರಬೇಕು. ಅದು ಹಣಕಾಸಿನ ವಿಚಾರವೋ ಮಗುವಿನ ವಿಚಾರವೋ ಯಾವುದೋ ಅಕ್ರಮ ಸಂಬಂಧವೋ ಮತ್ತೊಂದೋ. ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಕಿರಣ್ ರಾವ್ ದಾಂಪತ್ಯದಲ್ಲಿ ಬಿಡುಕು ಮೂಡಿದೆ. ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟು ಕಿರಣ್ ರಾವ್ರನ್ನು ಪ್ರೀತಿಸಿ ಮದುವೆ ಆಗಿದ್ದ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಈಗ ಎರಡನೇ ಹೆಂಡತಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಇವರಿಬ್ಬರ ನಡುವೆ ಹಣ, ಮಗುವಿನ ವಿಚಾರ ಬರೋದಕ್ಕೆ ಸಾಧ್ಯವೇ ಇಲ್ಲ. ಹಾಗಾದ್ರೆ, ಅಕ್ರಮ ಸಂಬಂಧದ ವಿಚಾರ ಏನಾದ್ರು, ಇದ್ಯಾ ಅಂದ್ರೆ, ಇಡೀ ಬಿಟೌನ್ ಫಾತಿಮಾ ಸನಾ ಶೇಕ್ ಕಡೆ ನೋಡ್ತಿದೆ.
ಆಮಿರ್ ಹಾಗೂ ಕಿರಣ್ ರಾವ್ ಸಂಬಂಧದಲ್ಲಿನ ಬಿರುಕಿಗೆ ಬಾಲಿವುಡ್ ನಾನಾ ಕಾರಣ ಕೊಡುತ್ತಿದೆ. ಆದ್ರೆ, ಇಬ್ಬರೂ ವಿಚ್ಚೇದನ ಘೋಷಿಸಿದ ಬಳಿಕ ಜೊತೆಯಾಗಿ ಕೂತು ವಿಡಿಯೋ ಮಾಡಿದ್ದಾರೆ. ‘‘ನಮ್ಮ ಸಂಬಂಧದಲ್ಲಿ ಬದಲಾವಣೆಯಾಗಿದೆ ಅಷ್ಟೇ. ಆದ್ರೆ ಈಗಲೂ ನಮ್ಮ ಸಂಬಂಧ ಚೆನ್ನಾಗಿದೆ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಿನಿಮಾ, ಪಾನಿ ಫೌಂಡೇಷನ್ ಎಲ್ಲದರಲ್ಲೂ ಒಟ್ಟಿಗೆ ದುಡಿಯುತ್ತೇವೆ.’’ ಎಂದು ಆಮಿರ್ ಹಾಗೂ ಕಿರಣ್ ರಾವ್ ಹೇಳಿದ್ದಾರೆ.
ಇನ್ನು ಆಮಿರ್ ಹಾಗೂ ಕಿರಣ್ ರಾವ್ ಸಂಬಂಧದಲ್ಲಿ ಬಿರುಕು ಮೂಡಲು ಒಂದಿಷ್ಟು ಕಾರಣಗಳಿವೆ. ಇವ್ರಿಬ್ಬರ ಸಂಬಂಧದಲ್ಲಿ ಬಿರುಕು ಬಿಡೋಕೆ ಬಾಲಿವುಡ್ ನಟಿ ಕಾರಣ ಎನ್ನಲಾಗುತ್ತಿದೆ. ಆಕೆ ಮತ್ಯಾರೂ ಅಲ್ಲ ದಂಗಲ್ ಬೆಡಗಿ ಫಾತಿಮಾ ಸನಾ ಶೇಕ್. ಅರೇ ಆಮಿರ್ ಖಾನ್ ಮತ್ತು ಫಾತಿಮಾ ‘ದಂಗಲ್’ ಚಿತ್ರದಲ್ಲಿ ತಂದೆ ಮಗಳಾಗಿ ನಟಿಸಿದ್ದರು. ಇವರಿಬ್ಬರ ನಡುವೆ ಅದೆಂಥ ಸಂಬಂಧ ಇರೋದಕ್ಕೆ ಸಾಧ್ಯ ಅನ್ನೋ ಅನುಮಾನ ಮೂಡಬಹುದು. ಆದರೆ ಆಮಿರ್ –ಕಿರಣ್ ಡಿವೋರ್ಸ್ಗೆ ಫಾತಿಮಾ ಕಾರಣ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಎರಡು ದಿನಗಳಿಂದ ಹ್ಯಾಷ್ಟ್ಯಾಗ್ ಫಾತಿಮಾ ಟ್ರೆಂಡಿಂಗ್ನಲ್ಲಿದೆ. ದಂಗಲ್ ಸಿನಿಮಾ ನಂತರ ಆಮಿರ್- ಫಾತಿಮಾ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಾಯಕ-
ನಾಯಕಿಯಾಗಿ ನಟಿಸಿದ್ದರು. ಆಕೆಯನ್ನು ಆ ಪಾತ್ರಕ್ಕೆ ಆಯ್ಕೆ ಮಾಡುವಂತೆ ಚಿತ್ರತಂಡದ ಮೇಲೆ ಖುದ್ದು ಆಮೀರ್ ಒತ್ತಡ ಹೇರಿದ್ದರಂತೆ. ಕತ್ರೀನಾ ಪಾತ್ರವನ್ನು ಕಟ್ ಮಾಡಿ ಫಾತಿಮಾ ಪಾತ್ರಕ್ಕೆ ಹೆಚ್ಚು ಸ್ಕೋಪ್ ಬರುವಂತೆ ನೋಡಿಕೊಂಡಿದ್ದರಂತೆ ಮಿಸ್ಟರ್ ಪರ್ಫೆಕ್ಷನಿಸ್ಟ್. ಇದಕ್ಕೆ ಕ್ಯಾಟ್ ರಂಪ ರಾಮಾಯಣ ಮಾಡಿ ಆ ವಿಚಾರ ಕಿರಣ್ ಕಿವಿಗೆ ಬಿದ್ದು ಭಾರೀ ಪ್ರಾಬ್ಲಂ ಆಗಿತ್ತಂತೆ.
ದಂಗಲ್, ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಪ್ರಮೋಷನ್ ವೇಳೆ ಆಮೀರ್-ಫಾತಿಮಾ ಸನಾ ಶೇಕ್ ಬಹಳ ಆಪ್ತವಾಗಿ ಓಡಾಡಿದ್ದರು. ಇದೀಗ ಆಮೀರ್- ಕಿರಣ್ ರಾವ್ ಡಿವೋರ್ಸ್ ಅಂದಾಕ್ಷಣ ಸಹಜವಾಗಿಯೇ ಎಲ್ಲರ ದೃಷ್ಟಿ ದಂಗಲ್ ಬೆಡಗಿಯತ್ತ ಹೊರಳಿದೆ. ಆದರೆ ಈ ಬಗ್ಗೆ ಆಮೀರ್ ಖಾನ್, ಕಿರಣ್ ರಾವ್, ಫಾತಿಮಾ ಯಾರೊಬ್ಬರು ಮಾತನಾಡಿಲ್ಲ. ಡಿವೋರ್ಸ್ ಆದ್ರು ನಾವಿಬ್ಬರ ಸ್ನೇಹ ಹೀಗೆ ಮುಂದುವರೆಯುತ್ತೆ ಅಂತ ಆಮೀರ್- ಕಿರಣ್ ಹೇಳಿದ್ದಾರೆ. ಆದರೂ ಅಭಿಮಾನಿಗಳು ಈ ಸುದ್ದಿ ಕೇಳಿ ಬೇಸರಗೊಂಡಿದ್ದಾರೆ.ಇ