ಟಾಲಿವುಡ್ನ ಟಫ್ ಹೀರೋ ಯಾರು ಅಂತ ಕೇಳಿದ್ರೆ ಅಭಿಮಾನಿಗಳು ಜೂನಿಯರ್ ಎನ್ಟಿಆರ್ ಹೆಸರು ಹೇಳ್ತಾರೆ. ಇವರು ಮಾಡೋ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಆ ಮಟ್ಟಿಗೆ ಸೆಳೆಯುತ್ತೆ. ಆ್ಯಕ್ಷನ್, ಡ್ಯಾನ್, ಡೈಲಾಗ್ ಎಲ್ಲವೂ ತಾರಕ್ ಫ್ಯಾನ್ಸ್ಗೆ ಇಷ್ಟ. ಸ್ಟುಡೆಂಟ್ ನಂ1. ಯಮದೊಂಗ, ಜನತಾ ಗ್ಯಾರೇಜ್, ಅರವಿಂದ ಸಮೇತಾ ಅಂತಹ ಸಿನಿಮಾಗಳೇ ಸಾಕ್ಷಿ. ಈ ಸೂಪರ್ ಸ್ಟಾರ್ ಈಗ 38 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಆದ್ರೆ, ಲಾಕ್ಡೌನ್ ಅಡ್ಡಿಯಾಗಿದ್ದರಿಂದ ಪ್ರತಿ ವರ್ಷದಂತೆ ಈ ವರ್ಷ ಮನೆಯ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ ಇರೋದಿಲ್ಲ. ಆದ್ರೇನಂತೆ ಜೂ.ಎನ್ಟಿಆರ್ ಅಭಿಮಾನಿಗಳು ಕಳೆದ ರಾತ್ರಿಯಿಂದ್ಲೇ ಟ್ವಿಟ್ಟರ್ನಲ್ಲಿ #HappyBirthdayNTR ಅಂತ ಟ್ರೆಂಡಿಂಗ್ ಶುರುಮಾಡಿದ್ದಾರೆ.
ಇದೇ ವೇಳೆ ಜೂ.ಎನ್ಟಿಆರ್ ಹಾಗೂ ಅವ್ರ ಅಭಿಮಾನಿಗಳಿಗಾಗಿ RRR ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಅನ್ನ ಬಿಡುಗಡೆಯಾಗಿದೆ. ಕೊಮರಂ ಭೀಮ್ ಪಾತ್ರದಲ್ಲಿ ನಟಿಸುತ್ತಿರೋ ಜೂ.ಎನ್ಟಿಆರ್ ಮತ್ತಷ್ಟು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತ: ಜೂ.ಎನ್ಟಿಆರ್ ಕೊಮರಂ ಭೀಮ್ ಹೊಸ ಲುಕ್ ಅನ್ನು ಟ್ವಿಟರ್ನಲ್ಲಿ ರಿಲೀಸ್ ಮಾಡಿದ್ದಾರೆ. ‘‘ ಅವನು ಹೃಯದಿಂದಲೇ ಕ್ರಾಂತಿಕಾರಿ.. ಇಂತಹ ತೀವ್ರತೆಯುಳ್ಳ ಪಾತ್ರವನ್ನು ನಿರ್ವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದುವರೆಗೂ ನನಗೆ ಅತೀ ದೊಡ್ಡ ಸವಾಲೆನಿಸಿದ್ದನ್ನು ನಿಮ್ಮೆಲ್ಲರಿಗೂ ಪರಿಚಯಿಸುತ್ತಿದ್ದೇನೆ. #KomaramBheem from #RRRMovie.’’ ಎಂದು ಬರೆದುಕೊಂಡಿದ್ದಾರೆ.
ಜೂ.ಎನ್ಟಿಆರ್ RRR ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ರಾಜಮೌಳಿ ಕೂಡ ಈ ಪೋಸ್ಟರ್ ಅನ್ನ ಟ್ವೀಟ್ ಮಾಡಿದ್ದು, ‘‘ನನ್ನ ಭೀಮನದ್ದು ಬಂಗಾರದಂತಹ ಹೃದಯ. ಆದ್ರೆ, ಅವನು ರೊಚ್ಚಿಗೆದ್ದಾಗ ಅಷ್ಟೇ ಬಲಶಾಲಿಯಾಗಿ ಖಡಕ್ ಆಗಿ ನಿಲ್ಲುತ್ತಾನೆ. ನೀರಿನ ಅಲೆಯಂತೆ’’ ಎಂದು ಟ್ವೀಟರ್ ಮಾಡಿದ್ದಾರೆ.
ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಡಬಲ್ ಧಮಾಕ. ಒಂದ್ಕಡೆ RRR ಸಿನಿಮಾ ಪೋಸ್ಟರ್ ರಿಲೀಸ್ ಆಗಿದ್ರೆ, ಇನ್ನೊಂದ್ಕಡೆ ನೆಚ್ಚಿನ ನಟನ ಹುಟ್ಟುಹಬ್ಬ. ಆದ್ರೆ, ಮನೆಬಳಿ ಹೋಗಿ ಬರ್ತ್ ಡೇ ಸೆಲೆಬ್ರೆಟ್ ಮಾಡುವಂತಿಲ್ಲ ಅನ್ನೋ ಬೇಸರವಂತೂ ಇದ್ದೇ ಇದೆ.