ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ, ಅದು ಇದೇ ಇರಬೇಕು. ಒಬ್ಬ ಮಹಿಳೆ ಲಾಟರಿ ಟಿಕೆಟ್ ಖರೀದಿಸಿ, ಪ್ಯಾಂಟಿನಲ್ಲಿ ಇಟ್ಟುಕೊಂಡು ಮರೆತುಬಿಟ್ಟಿದ್ದಾಳೆ. ಪ್ಯಾಂಟ್ನ ಲಾಂಡ್ರಿ ಕೊಟ್ಟು ಒಗೆಸಿಬಿಟ್ಟಿದ್ದಾಳೆ. ಹೋದ್ರೆ ಹೋಗಲಿ ಅಂದುಕೊಳ್ಳುವ ಹೊತ್ತಿಗೆ ಶಾಕಿಂಗ್ ನ್ಯೂಸ್ ಕೇಳಿದ್ದಾಳೆ. ಅದೇನಂದ್ರೆ ಆ ಲಾಟರಿ ಟಿಕೆಟ್ಗೆ ಮೊದಲ ಬಹುಮಾನ 190 ಕೋಟಿ ಬಂದಿದೆ. ಬಾಯಿ ಬಡ್ಕೊಂಡು ಲಾಟರಿ ಆಫೀಸ್ಗೆ ಓಡಿದ್ದಾಳೆ. ಬಟ್ ಏನ್ ಮಾಡೋದು ಲಾಟರಿ ಟಿಕೆಟ್ ಇಲ್ಲ. ಹಂಗಾದ್ರೆ ಆಕೆಗೆ ಲಾಟರಿ ಬಹುಮಾನದ ಹಣ ಸಿಕ್ತಾ ಇಲ್ವಾ.
ಕ್ಯಾಲಿಫೋರ್ನಿಯಾದ ಮಹಿಳೆ ಲಾಸ್ ಏಂಜಲ್ಸ್ ಸಬರ್ಬ್ ನಾರ್ವಾಕ್ ಆರ್ಕ್ ಕನ್ವಿನಿಯೆನ್ಸ್ ಸ್ಟೋರ್ನಲ್ಲಿ ಸೂಪರ್ ಲೊಟ್ಟೋ ಪ್ಲಸ್ ಲಾಟರಿ ಟಿಕೆಟ್ ಕೊಂಡುಕೊಂಡಿದ್ದಾಳೆ. ಅದರ ಸಂಖ್ಯೆ 23, 36, 12, 31, 13 ಮತ್ತು 10. ಟಿಕೆಟ್ ತಗೊಂಡು ಪ್ಯಾಂಟ್ನಲ್ಲಿಟ್ಟು ಮರೆತು, ಲಾಂಡ್ರಿಗೆ ಕೊಟ್ಟು ಹಾಳು ಮಾಡಿಕೊಂಡಿದ್ದಾಳೆ. ಒಂದು ಸಾವಿರ, ಎರಡು ಸಾವಿರ, ಲಕ್ಷ ಕೂಡ ಅಲ್ಲ ಬರೋಬ್ಬರಿ 20 ಮಿಲಿಯನ್ ಡಾಲರ್ (190 ಕೋಟಿ) ಬಹುಮಾನ. ಕೂಡಲೇ ಲಾಟರಿ ಸಂಸ್ಥೆ ಆಫೀಸ್ಗೆ ಹೋಗಿ ಲಾಟರಿಯಲ್ಲಿ ಗೆದ್ದಿರೋದು ನಾನೇ, ಆದರೆ ಈಗ ನನ್ನ ಬಳಿ ಟಿಕೆಟ್ ಇಲ್ಲ. ಬೇಕಿದ್ರೆ, ಅಂಗಡಿ ಸಿಸಿಟಿವಿ ಚೆಕ್ ಮಾಡಿ. ನಾನು ಬಂದು ಲಾಟರಿ ಟಿಕೆಟ್ ಕೊಂಡುಕೊಂಡಿರೋದು ಗೊತ್ತಾಗುತ್ತೆ ಅಂದಿದ್ದಾಳೆ. ಸಿಸಿಟಿವಿಯಲ್ಲಿ ಆಕೆ ಬಂದು ಟಿಕೆಟ್ ಖರೀದಿಸಿರೋದು ಗೊತ್ತಾಗ್ತಿದೆ. ಆದರೆ ಟಿಕೆಟ್ ಇಲ್ಲದೇ ಬಹುಮಾನ ಕೊಡೋಕೆ ಸಾಧ್ಯವಿಲ್ಲ ಅಂತಿದ್ದಾರೆ.
ಲಾಟರಿ ಹಣ ತೆಗೆದುಕೊಳ್ಳೋಕೆ ಗುರುವಾರ ಕೊನೆ ದಿನ ಆಗಿತ್ತು. ಆ ಮಹಿಳೆ ಬುಧವಾರವೇ ಬಂದು ನಾನೇ ಟಿಕೆಟ್ ಕೊಂಡುಕೊಂಡಿರೋದಾಗಿ ಹೇಳಿದ್ದಾಳೆ. ಕೊನೆ ಪಕ್ಷ ಟಿಕೆಟ್ ಹಿಂದೆ ಮುಂದೆ ಫೋಟೋ ತೆಗೆದು ತೋರಿಸಿ, ಕ್ಲೈಮ್ ಮಾಡಿದ್ರು ಹಣ ಬರ್ತಿತ್ತು. ಆದರೆ ಆಕೆ ಲಾಟರಿ ಟಿಕೆಟ್ ಫೋಟೋ ಕೂಡ ತೆಗೆದಿಲ್ಲ. ಸದ್ಯ ಲಾಟರಿ ಸಂಸ್ಥೆ ಲಾಟರಿ ಬಹುಮಾನವನ್ನ ಏನು ಮಾಡೋದು ಅಂತ ಚರ್ಚೆ ನಡೆಸ್ತಿದ್ದಾರೆ.