

ಪ್ರಭಾಸ್ ಈಗ ಕೇವಲ ಟಾಲಿವುಡ್ ಸೂಪರ್ಸ್ಟಾರ್ ಅಷ್ಟೇ ಅಲ್ಲ. ಯಂಗ್ ರೆಬೆಲ್ ಈಗ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್. ಅದಕ್ಕೆ ನಿರ್ಮಾಪಕರು ಸಿನಿಮಾ ಮಾಡೋಕೆ ಕ್ಯೂನಲ್ಲಿ ನಿಂತಿದ್ದಾರೆ. ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಹಿಂದೆ ನಿರ್ಮಾಪಕರು ಹೇಗೆ ಬೀಳ್ತಾರೋ.. ಹಾಗೇ ಜಾಹೀರಾತು ಕಂಪನಿಗಳೂ ಬೀಳೋದು ಕಾಮನ್.. ಬಾಹುಬಲಿ ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿದ್ದಂತೆ ಪ್ರಭಾಸ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸೂಪರ್ಸ್ಟಾರ್ ಆಗಿದ್ದರು. ಹೀಗಾಗಿ ಜಾಹೀರಾತು ಕಂಪನಿಗಳು ಪ್ರಭಾಸ್ ಹಿಂದೆ ಬಿದ್ದವು. ಆ ವೇಳೆ 10 ಕೋಟಿಯಷ್ಟು ಮೌಲ್ಯ ಜಾಹೀರಾತಿನ ಕಾಂಟ್ರೆಕ್ಟ್ ಅನ್ನ ಪ್ರಭಾಸ್ ತಿರಸ್ಕರಿಸಿದ್ದರು.
ಬಾಹುಬಲಿಗಾಗಿ ಪ್ರಭಾಸ್ ಹೆಚ್ಚು ಕಡಿಮೆ 5 ವರ್ಷ ಯಾವುದೇ ಸಿನಿಮಾವನ್ನೂ ಮಾಡಿಲ್ಲ. ಬಾಹುಬಲಿ ಮತ್ತು ಬಾಹುಬಲಿ 2 ಬಿಡುಗಡೆ ಮಧ್ಯೆ ಪ್ರಭಾಸ್ಗೆ ಸಿನಿಮಾಗಳ ಜೊತೆ ಜಾಹೀರಾತುಗಳಲ್ಲಿ ನಟಿಸೋಕೆ ಆಫರ್ ಬಂದಿದ್ದವು.ಈ ವೇಳೆ ಪ್ರಭಾಸ್ ಹುಡ್ಕೊಂಡು 10 ಕೋಟಿ ಮೌಲ್ಯದ ಜಾಹೀರಾತು ಬಂದಿತ್ತು. ಆದ್ರ, ಪ್ರಭಾಸ್ ಸರಾಸಗಟಾಗಿ ತಿರಸ್ಕರಿಸಿದ್ದರು.
ಬಾಹುಬಲಿ ವೇಳೆ ಪ್ರಭಾಸ್ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸದೆ ಇರಲು ಚಿಂತಿಸಿದ್ದರು. ಆ ಸಮಯದಲ್ಲಿ ಪ್ರಭಾಸ್ಗೆ ಸಾಕಷ್ಟು ನಿರ್ಮಾಪಕರು ಅಡ್ವಾನ್ಸ್ ಬುಕಿಂಗ್ ಮಾಡುತ್ತಿದ್ದರಂತೆ. ಆದರೆ ಪ್ರಭಾಸ್ ಗೆ ನಿರ್ಮಾಪಕರು ಕೊಡ್ತಿರೋ ಹಣವನ್ನ ತೆಗೆದುಕೊಳ್ಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದರು. ಈ ವೇಳೆನೇ ಪ್ರಭಾಸ್ ಗೆ 10 ಕೋಟಿ ರೂ. ಜಾಹೀರಾತಿನ ಆಫರ್ ಸಹ ಬಂದಿತ್ತು. ಆದರೆ ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ಇಷ್ಟು ದೊಡ್ಡ ಆಫರ್ ಅನ್ನ ಕೈ ಬಿಟ್ಟಿದ್ದರು.
ಈ ಎಲ್ಲಾ ವಿಷಯವನ್ನ ಬಹಿರಂಗ ಪಡಿಸಿದ್ದು, ಮತ್ಯಾರೂ ಅಲ್ಲ ರಾಜಮೌಳಿ. ನಿರ್ಮಾಪಕರ ಹಣ ಹಿಡಿದು ಪ್ರಭಾಸ್ ಮನೆ ಬಳಿ ಬಂದಾಗ, ಅವರಿಗೆ ಗಾಬರಿ ಆಗ್ತಿತ್ತು. ಈ ವೇಳೆ ಏನ್ ಮಾಡ್ಬೇಕು ಅಂತ ತನ್ನ ಸಲಹೆ ಪಡೆದಿದ್ದು ಎಂದು ರಾಜಮೌಳಿ ಹೇಳಿಕೊಂಡಿದ್ದಾರೆ.