ರಾಶಿ ಖನ್ನಾ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಚಿರಪರಿಚಿತ ನಟಿ. ಈ ನಟಿ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಆಕೆಯ ಒಂದು ಫೋಟೋ ಇಂಟರ್ನೆಟ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಕಿನಿಯಲ್ಲಿ ತನ್ನ ವೈಯ್ಯಾರವನ್ನ ತೋರಿಸಿದ ನಟಿಯ ಫೋಟೋ ಕಂಡು ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ. ಈ ಬೋಲ್ಡ್ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.
ರಾಶಿ ಖನ್ನಾಳ ಈ ಬೋಲ್ಡ್ ಅವತಾರ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಆದರೆ, ಇದ್ದಕ್ಕಿದ್ದ ಹಾಗೇ ರಾಶಿ ಖನ್ನಾ ಹೀಗೆ ಬಿಕಿನಿ ಲುಕ್ ಕೊಟ್ಟಿದ್ದೇಕೆ? ಅನ್ನೋದಕ್ಕೆ ಕಾರಣ ತಿಳಿದುಬಂದಿಲ್ಲ. ಇದು ಯಾವುದೇ ಸಿನಿಮಾಗೆ ಕೊಟ್ಟ ಭಂಗಿಯಲ್ಲ. ಸ್ವಿಮ್ಮಿಂಗ್ ಪೂಲ್ ಬಳಿ ರಾಶಿಯ ವೈಯ್ಯಾರದ ಮೈಮಾಟ, ಮುಗ್ಧ ನೋಟ ಕಂಡು ಯಾರು ಮರುಳಾಗೋದಿಲ್ಲ ಹೇಳಿ.
ಊಹಲು ಗುಸಗುಸಲಾಡೆ ಸಿನಿಮಾದಿಂದ ರಾಶಿ ಖನ್ನಾ ಮೊದಲು ಟಾಲಿವುಡ್ಗೆ ಪ್ರವೇಶಿಸಿದ್ರು. ಇದು 2014ರಂದು ಬಿಡುಗಡೆಯಾಗಿತ್ತು. ವಿಜಯ್ ದೇವರಕೊಂಡ ನಟಿಸಿದ ವರ್ಲ್ಡ್ ಫೇಮಸ್ ಲವರ್ ಸಿನಿಮಾದಲ್ಲಿ ರಾಶಿ ಕೊನೆಯದಾಗಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ, ರಾಶಿ ಬಳಿ ಸಾಕಷ್ಟು ತಮಿಳು ಸಿನಿಮಾಗಳಿವೆ. ಅರಂನ್ಮಣೈ 3, ಮೆತಾವಿ ಅಂಡ್ ಸೈಥಾನ್ ಕಾ ಬಚ್ಚಾ ಚಿತ್ರಗಳು ವಿಭಿನ್ನ ಸ್ಟೇಜ್ನಲ್ಲಿ ಶೂಟಿಂಗ್ ನಡೆಯುತ್ತಿದೆ.
ಇತ್ತೀಚೆಗೆ ಈ ಬೋಲ್ಡ್ ನಟಿ ಪಕ್ಕಾ ಕಮರ್ಷಿಯಲ್ ಅನ್ನೋ ತೆಲುಗು ಸಿನಿಮಾಗೆ ಸಹಿ ಮಾಡಿದ್ದಾಳೆ. ಬಹಳ ದಿನಗಳ ಬಳಿಕ ಗೋಪಿಚಂದ್ ನಾಯಕನಾಗಿ ನಟಿಸ್ತಿರೋ ಸಿನಿಮಾದಲ್ಲಿ ರಾಶಿ ನಟಿಸಲಿದ್ದಾಳೆ. ಮಾರುತಿ ಈ ಸಿನಿಮಾವನ್ನ ನಿರ್ದೇಶಿಸಲಿದ್ದು, ರಾಶಿ ಇಲ್ಲೂ ಗ್ಲಾಮರ್ ಲುಕ್ನಲ್ಲೇ ಕಾಣಿಸಿಕೊಳ್ತಾಳಾ ಅನ್ನೋ ಕುತೂಹಲವಿದೆ.