ಬಾಲಿವುಡ್ ನಟ ಸೋನು ಸೂದ್ ಅದೇಷ್ಟು ಭಾರತೀಯರಿಗೆ ಸೂಪರ್ ಹೀರೋ. ಲಾಕ್ಡೌನ್ ವೇಳೆ ತನ್ನ ಸ್ವಂತ ಖರ್ಚಿನಲ್ಲಿ ಅದೆಷ್ಟೋ ಕಾರ್ಮಿಕರನ್ನ ಹುಟ್ಟೂರಿಗೆ ತಲುಪಿಸಿದ್ದು, ಇದೇ ಸೋನು ಸೂದ್. ಆದ್ರೀಗ ಈ ನಟನ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಗಂಭೀರ ಆರೋಪ ಮಾಡಿ, ನೋಟಿಸ್ ಜಾರಿ ಮಾಡಿತ್ತು.
ಮುಂಬೈನ ಜೂಹುವಿನಲ್ಲಿ ಸೋನು ಸೂದ್ ಒಡೆತನದ ಹೊಟೇಲ್ ಇದು. ಇದನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಮುಂಬೈ ಬೃಹತ್ ಮಹಾನಗರ ಪಾಲಿಕೆ ನೋಟಿಸ್ ನೀಡಿತ್ತು. ಇದರಿಂದ ಸೋನು ಸೂದ್ ಹಾಗೂ ಮುಂಬೈನ ಮುಂಬೈ ಮಹಾನಗರ ಪಾಲಿಕೆ ನಡುವೆ ಕಿತ್ತಾಟ ಶುರುವಾಗಿತ್ತು. ಈ ಸಂಬಂಧ ಸೋನು ಸೂದ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.
ಬಾಂಬೆ ಹೈ ಕೋರ್ಟಿನಲ್ಲಿ ಸೋನು ಸೂದ್ಗೆ ನಿರಾಸೆಯಾಗಿತ್ತು. ಹೀಗಾಗಿ ಸೋನು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸೋನು ಸೂದ್ ಮನವಿಯನ್ನ ಪರಿಗಣಿಸಿದ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸೋನು ತನ್ನ ಕಟ್ಟಡವನ್ನ ಕಾನೂನು ಬದ್ಧವಾಗಿ ಸರಿಪಡಿಸುವುದಾಗಿ ಹೇಳಿದ್ದಾರೆ. ಅಲ್ಲಿವರೆಗೂ ಯಾವುದೇ ರೀತಿ ತೆರವು ಕಾರ್ಯಾಚರಣೆ ಮಾಡುವಂತಿಲ್ಲವೆಂದು ಮಹಾನಗರ ಪಾಲಿಕೆಗೆ ಸುಪ್ರೀಂ ತಾಕೀತು ಮಾಡಿದೆ.
ಇತ್ತ ಸೋನು ಸೂದ್ ತನ್ನ ಕಟ್ಟಡವನ್ನ ಕಾನೂನು ಬದ್ಧವಾಗಿ ಕಟ್ಟಿದ್ದೇನೆ. ಕಟ್ಟಡದ ಬಣ್ಣದಲ್ಲಿ ಕೆಲವು ಬದಲಾವಣೆಗಳನ್ನ ಮಾಡಬೇಕಿದೆ ಅಷ್ಟೇ. ಅದನ್ನ ಸರಿಪಡಿಸುವುದಾಗಿ ಸೋನು ಸೂದ್ ಹೇಳಿದ್ದಾರೆ. ಅಲ್ಲದೆ ಮುಂದೆ ಯಾವುದೇ ಕೆಲಸ ಮಾಡಬೇಕಿದ್ದರೂ ಕಾನೂನು ರೀತಿಯಲ್ಲೇ ಮಾಡುವುದಾಗಿ ಹೇಳಿದ್ದಾರೆ.