ಪೊಗರು ಸಿನಿಮಾ ನಿರ್ಮಾಣ ಆಗಲು ಹಿಡಿದಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವರ್ಷ. ಒಂದು ಸಿನಿಮಾಗೆ ಮೂರು ವರ್ಷ ಬೇಕಿತ್ತಾ? ಅಂತಹದ್ದೇನಿದೆ ಈ ಸಿನಿಮಾದಲ್ಲಿ ಅನ್ನೋರಿಗೆ ಪೊಗರು ಈಗಾಗಲೇ ಉತ್ತರ ಕೊಟ್ಟಿದೆ. ಧ್ರುವ ಸರ್ಜಾ ಆ್ಯಕ್ಷನ್ ಸೀಕ್ವೆನ್ಸ್. ಮೂರು ಶೇಡ್ಗಳು. ಸಿನಿಮಾ ಪ್ರೇಮಿಗಳಿಗೆ ಇನ್ನೇನು ಬೇಕು. ಪೊಗರು ರಿಲೀಸ್ ಆಗ್ತಿದ್ದಂತೆ ಧ್ರುವ ಸರ್ಜಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಸರಿ, ಪೊಗರು ರಿಲೀಸ್ ಆಯ್ತು ಮುಂದೇನು?
ಧ್ರುವ ಸರ್ಜಾ ಸಿನಿಮಾಗೆ ಮೂರು ವರ್ಷ ಹಿಡಿಯುತ್ತಿರಲಿಲ್ಲ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆದರೆ, ಲಾಕ್ಲಾಡ್ ಚಿತ್ರತಂಡದ ಎಲ್ಲಾ ಲೆಕ್ಕಾಚಾರವನ್ನೂ ತಲೆಕೆಳಗೆ ಮಾಡಿತ್ತು. ಹೀಗಾಗಿ ಧ್ರುವ ಸರ್ಜಾ ಸಿನಿಮಾ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈಗ ದೊಡ್ಡ ಪ್ರಮಾಣದಲ್ಲೇ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಫಸ್ಟ್ ಡೇ ಫಸ್ಟ್ ಶೋ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ಮುಂದೆ ಧ್ರುವ ಸರ್ಜಾ ಮುಂದಿನ ಸಿನಿಮಾದ ಕತೆಯೇನು? ಅದೂ ಶುರುವಾಗೋದ್ಯಾವಾಗ? ಧ್ರುವ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಅನ್ನೋದನ್ನ ನೋಡೋಣ.
ಧ್ರುವ ಸರ್ಜಾ ಹೊಸ ಈಗಾಗಲೇ ಸೆಟ್ಟೇರಿದೆ. ದುಬಾರಿ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಮಧ್ಯದಲ್ಲಿ ಪೊಗರು ರಿಲೀಸ್ ಅಂತ ಬಿಡುವು ಕೊಟ್ಟಿದ್ದ ಧ್ರುವ ಇನ್ನು ಕೆಲವು ದಿನಗಳಲ್ಲಿ ಶೂಟಿಂಗ್ ಸೆಟ್ಟಿಗೆ ಹೋಗ್ತಾರೆ. ಹಾಗಂತ ದುಬಾರಿ ಎರಡು ಮೂರು ವರ್ಷ ಹಿಡಿಯೋದಿಲ್ಲ. ಆದಷ್ಟು ಬೇಗ ಶೂಟಿಂಗ್ ಮಾಡಿ, ಸಿನಿಮಾ ಮುಗಿಸೋ ತರಾತುರಿಯಲ್ಲಿದ್ದಾರೆ.
ಇದ್ರೊಂದಿಗೆ ಎ.ಪಿ ಅರ್ಜುನ್ ನಿರ್ದೇಶನದ ಸಿನಿಮಾ ಕೂಡ ಸೆಟ್ಟೇರಲಿದೆ. ಧ್ರುವ ಅಂದ್ಕೊಂಡಂತೆ ದುಬಾರಿ ಶೂಟಿಂಗ್ ಮುಗಿದ್ರೆ, ಈ ವರ್ಷವೇ ಅರ್ಜುನ್ ಸಿನಿಮಾ ಸೆಟ್ಟೇರುತ್ತೆ. ಪೊಗರು ನಿರ್ಮಾಪಕ ಬಿಕೆ ಗಂಗಾಧರ್ ಹಾಗೂ ಶಿವಾರ್ಜುನ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಧ್ರುವ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೆಟ್ಟೇರಲಿವೆ ಅಂತ ಸ್ಯಾಂಡಲ್ವುಡ್ ಹೇಳ್ತಿದೆ.