ಸೆಂಚುರಿ ಸ್ಟಾರ್ ಶಿವಣ್ಣ ದುಷ್ಟ ಶಕ್ತಿಗಳನ್ನ ಸಂಹಾರ ಮಾಡೋಕೆ ಭಜರಂಗಿ ಅವತಾರವೆತ್ತಿದ್ದಾರೆ. ದುಷ್ಟ ಶಕ್ತಿಗಳು ಹಿಂದೆಂದೂ ನೋಡಿರದಷ್ಟು ಭಯಂಕರ, ಭಯಾನಕ. ರಕ್ತ ಹೀರುವ ಕ್ರೂರಿಗಳು. ಕಾಳಿ ಮಾತೆ, ಕೋಪಗೊಂಡಿರುವ ಮಹಾ ಮಾಂತ್ರಿಕರು. ರುಂಡ, ಮುಂಡಗಳೇ ರಾರಾಜಿಸೋ ಗುಹೆ ಇವೆಲ್ಲವನ್ನೂ ನೋಡಿದ್ರೆ, ಭಜರಂಗಿ 2 ಎಷ್ಟು ಭಯಾನಕ ಅನ್ನೋದು ಗೊತ್ತಾಗುತ್ತೆ.
ಭಜರಂಗಿ 2 ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇವೆಲ್ಲವೂ ಆ ಪೋಸ್ಟರ್ನ ಒಂದು ಝಲಕ್ ಅಷ್ಟೇ.. ಮೋಷನ್ ಪೋಸ್ಟರ್ ಹೀಗಿರ್ಬೇಕಾದ್ರೆ, ಇನ್ನು ಟ್ರೇಲರ್ ಹೇಗಿರ್ಬೇಡಾ..? ಟ್ರೈಲರ್ಗಿಂತ ಸಿನಿಮಾ ಹೇಗಿರ್ಬೇಡಾ? ಅದ್ರಲ್ಲೂ ಶಿವಣ್ಣ ಭಜರಂಗಿ ಅವತಾರದಲ್ಲಿ ಹಸಿರು ಬಿಟ್ಟು ರೋಷ ಹೊರಹಾಕಿರ್ಬೇಕಾದ್ರೆ, ಇದು ಮಹಾಯುದ್ಧದ ಸಂಕೇತ ಅಂತ್ಲೇ ಹೇಳ್ಬೇಹುದು.
ಭಜರಂಗಿ 2013 ರಲ್ಲಿ ಬಿಡುಗಡೆ ಆಗಿ ಬಾಕ್ಸಾಫೀಸ್ ನಲ್ಲಿ ಜಾದು ಮಾಡಿತ್ತು. ಶಿವಣ್ಣ, ಐಂದ್ರಿತಾ, ಲೋಕಿ ಪಾತ್ರಗಳು ಮಸ್ತ್ ಮೋಡಿ ಮಾಡಿತ್ತು. ಹರ್ಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಈ ಸಿನಿಮಾಗೆ ಮತ್ತಷ್ಟು ಕಿಕ್ ಕೊಟ್ಟಿತ್ತು. ಈಗ ಬರೋಬ್ಬರಿ 8 ವರ್ಷಗಳ ಬಳಿಕ ಭಜರಂಗಿ ಸೀಕ್ವೆಲ್ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಶಿವಣ್ಣನೊಂದಿಗೆ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ನಟಿ ಶ್ರುತಿ ನೆಗೆಟಿವ್ ರೋಲ್ನಲ್ಲಿ ಅಂತ ಮೇಲ್ನೋಟಕ್ಕೆ ಅನಿಸುತ್ತಿದೆ.
ಭಜರಂಗಿ 2 ಸಿನಿಮಾವನ್ನ ಜಯಣ್ಣ ಹಾಗೂ ಭೊಗೇಂದ್ರ ನಿರ್ಮಿಸಿದ್ದಾರೆ. ಎ. ಹರ್ಷ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಜನ್ಯ ಭಜರಂಗಿ 2ಗೆ ಸಂಗೀತ ಸಂಯೋಜಿಸಿದ್ದಾರೆ. ಭಜರಂಗಿ 2 ಮೇ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.