2021ರ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ 2. ಯಾವುದೇ ಅನುಮಾನವೇ ಇಲ್ಲದೆ ಕೆಜಿಎಫ್ 2 ಹೊಸ ದಾಖಲೆ ಬರೆಯುತ್ತೆ ಅನ್ನೋದನ್ನ ಹೇಳ್ಬಹುದು. ಈಗಾಗ್ಲೇ ಬಿಡುಗಡೆಯಾಗಿರೋ ಒಂದೇ ಒಂದು ಟೀಸರ್ ಬರೆದ ದಾಖಲೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಕೆಜಿಎಫ್ 2 ಟೀಸರ್ ಹೊಸ ದಾಖಲೆ ಸೃಷ್ಟಿಸುತ್ತಿದ್ದಂತೆ ಐದೂ ಭಾಷೆಯಲ್ಲೂ ಡಿಮ್ಯಾಂಡ್ ದುಪ್ಪಟ್ಟಾಗಿತ್ತು. ಕೆಜಿಎಫ್ 2 ಕೊಳ್ಳುವವರ ಸಂಖ್ಯೆನೂ ಹೆಚ್ಚಾಗಿತ್ತು. ನಿರ್ಮಾಪಕರು ಕೆಜಿಎಫ್ 2ಗಾಗಿ ಮುಗಿಬೀಳತೊಡಗಿದ್ದರು. ಆದ್ರೆ, ಕೆಜಿಎಫ್ ತಂಡದ ಲೆಕ್ಕಚಾರ ದೊಡ್ಡದಿತ್ತು. ತೆಲುಗು ಚಾಪ್ಟರ್ಗೆ ನಿರ್ಮಾಪಕರು ₹80 ಕೋಟಿ ಬೇಡಿಕೆ ಇಟ್ಟಿದ್ದರು ಅನ್ನೋ ಸುದ್ದಿಗಳು ಹರಿದಾಡಿದ್ದವು. ಇಷ್ಟುದೊಡ್ಡ ಅಮೌಂಟ್ ಕೇಳಿ ಟಾಲಿವುಡ್ನ ನಿರ್ಮಾಪಕರು ವಿತರಕರು ಬೆಚ್ಚಿಬಿದ್ದಿದ್ದರು.
ಹೌದು, ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ ₹65 ಕೋಟಿಗೆ ಸೇಲ್ ಆಗಿದೆ. ಈ ಸಿನಿಮಾವನ್ನ ಟಾಲಿವುಡ್ ನಿರ್ಮಾಪಕ ದಿಲ್ ರಾಜು ಖರೀದಿ ಮಾಡಿದ್ದಾರೆ. ಆದ್ರೆ, ಈ ಚಿತ್ರಕ್ಕೆ ವಾರಾಹಿ ಚಲನ ಚಿತ್ರಂ ಹಾಗೂ ದಿಲ್ ರಾಜು ಮಧ್ಯೆ ಪೈಪೋಟಿ ಬಿದ್ದಿತ್ತು. ಕೊನೆಗೆ ದಿಲ್ ರಾಜ್ ಅತೀ ಹೆಚ್ಚು ಬೆಲೆ ಹೇಳಿದ್ದರಿಂದ ಹಕ್ಕನ್ನ ಅವರಿಗೆ ನೀಡಲಾಯ್ತು.
ಕೆಜಿಎಫ್ 1 ಗೆ ಇದೇ ವಾರಾಹಿ ಚಲನ ಚಿತ್ರಂ ಸಂಸ್ಥೆ ವಿತರಣೆ ಮಾಡಿತ್ತು. ಆಗ ಚಾಪ್ಟರ್ 1 ಅನ್ನ ₹5 ಕೋಟಿಗೆ ಖರೀದಿ ಮಾಡಿತ್ತು. ಈಗ ಕೆಜಿಎಫ್ ತಂಡ ₹80 ಕೋಟಿ ಬೇಡಿಕೆ ಇಟ್ಟಿದ್ದನ್ನ ಕಂಡು ವಾರಾಹಿ ಸಂಸ್ಥೆ ದಂಗಾಗಿ ಹೋಗಿತ್ತು. ಚಾಪ್ಟರ್ 1 ಅನ್ನ ₹5 ಕೋಟಿ ಖರೀದಿಸಿದ್ದ ಸಂಸ್ಥೆ ಚಾಪ್ಟರ್ಗೆ 10 ಪಟ್ಟು ಹೆಚ್ಚು ಹಣ ಕೊಟ್ಟು ಖರೀದಿಸಲು ಹಿಂದೇಟು ಹಾಕಿತ್ತು. ಹೀಗಾಗಿ ದಿಲ್ ರಾಜುಗೆ ₹65 ಕೋಟಿಗೆ ಮಾರಾಟ ಮಾಡಿದೆ ಎನ್ನಲಾಗಿದೆ.
ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ ₹90 ಕೋಟಿಗೆ ಸೇಲ್ ಆಗಿದ್ದರೆ, ಟಾಲಿವುಡ್ ಚಾಪ್ಟರ್ ₹65 ಕೋಟಿಗೆ ಮಾರಾಟ ಆಗಿದೆ. ಇನ್ನು ಕನ್ನಡವನ್ನ ಹೊಂಬಾಳೆ ತಂಡವೇ ಬಿಡುಗಡೆ ಮಾಡಲಿದೆ. ಆದ್ರೆ, ಮಲಯಾಳಂ ಹಾಗೂ ತಮಿಳು ಎಷ್ಟಕ್ಕೆ ಸೇಲ್ ಆಗುತ್ತೆ ಅನ್ನೋ ಕುತೂಹಲ ಕೆರಳಿಸಿದೆ.