ಪ್ರೇಮಿಗಳ ದಿನದಂದು ಸ್ಯಾಂಡಲ್ವುಡ್ನಲ್ಲಿ ಅದ್ಧೂರಿಯಾಗಿ ಪೊಗರು ಆಡಿಯೋ ರಿಲೀಸ್ ಆಗುತ್ತೆ. ಸ್ವತ: ಧ್ರುವ ಸರ್ಜಾ ಅವರೇ ಇಡೀ ಚಿತ್ರರಂಗಕ್ಕೆ ಆಹ್ವಾನ ನೀಡಿದ್ದಾರೆ. ಆದ್ರೆ, ಮೊನ್ನೆ ಆಡಿಯೋ ರಿಲೀಸ್ ಬಗ್ಗೆ ಲೈವ್ನಲ್ಲಿ ಆಡಿದ ಧ್ರುವ ಮಾತೊಂದು ಭಾರೀ ಚರ್ಚೆಯಾಗ್ತಿದೆ.
ತನ್ನ ಅಭಿಮಾನಿಗಳಿಗೆ ಪೊಗರು ಆಡಿಯೋ ಲಾಂಚ್ ತಿಳಿಸುವ ವೇಳೆ ಧ್ರುವ ಸರ್ಜಾ ಅವ್ರಿಬ್ಬರೂ ಬಹಳ ದಿನಗಳ ಬಳಿಕ ಸ್ವೇಜ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದೊಂದು ಹೇಳಿಕೆ ಈಗ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಂವಲನವನ್ನೇ ಸೃಷ್ಟಿಸಿದೆ. ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಹಾಗೂ ಸುದೀಪ್ ಇಬ್ಬರೂ ಕೆಲವು ವರ್ಷಗಳಿಂದ ಮುನಿಸಿಕೊಂಡಿದ್ದಾರೆ. ಕುಚಿಕು ಗೆಳೆಯರು ಮಾತಾಡೋದನ್ನ ಬಿಟ್ಟು ವರ್ಷಗಳೇ ಆಗಿವೆ. ಹೀಗಾಗಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಂದೇ ವೇದಿಕೆ ಏರುತ್ತಾರಾ? ಅನ್ನೋ ಅನುಮಾನ ಕೂಡ ಎದ್ದಿದೆ. ಒಂದ್ವೇಳೆ ದ್ವೇಷ ಮರೆತು ಇಬ್ಬರೂ ನಟರೂ ಒಂದಾದ್ರೆ, 2021ರ ಮಹಾಸಂಗಮ ಅಂತಲೇ ಹೇಳಬಹುದು.
ಪೊಗರು ಆಡಿಯೋ ರಿಲೀಸ್ ವೇದಿಕೆ ಮೇಲೆ ದರ್ಶನ್ ಹಾಗೂ ಸುದೀಪ್ ಅಷ್ಟೇ ಅಲ್ಲ ಸ್ಯಾಂಡಲ್ವುಡ್ನ ದಿಗ್ಗಜರೂ ಕೂಡ ಭಾಗವಹಿಸಲಿದ್ದಾರೆ. ಪುನೀತ್ ರಾಜ್ಕುಮಾರ್, ಯಶ್, ಶಿವರಾಜ್ಕುಮಾರ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲಾ ಸೂಪರ್ಸ್ಟಾರ್ಗಳಿಗೂ ಆಹ್ವಾನ ನೀಡಲಾಗಿದೆ.